ಲಕ್ಷಗಟ್ಟಲೆ ಕೊಟ್ಟು ವೈದ್ಯಕೀಯ ಕಾಲೇಜು ಸೇರುವುದೇಕೆ?

ಕರ್ನಾಟಕದಲ್ಲೀಗ ೩೬ ವೈದ್ಯಕೀಯ ಕಾಲೇಜುಗಳಿವೆ, ಇನ್ನೂ ಕೆಲವು ಮುಂದಕ್ಕೆ ಬರಬಹುದು. ಲಕ್ಷಗಟ್ಟಲೆ ತೆತ್ತು ತಮ್ಮ ಮಕ್ಕಳನ್ನು ಈ ಕಾಲೇಜುಗಳಲ್ಲಿ ಸೇರಿಸುವ ಹೆತ್ತವರ ಸಂಖ್ಯೆಯೂ ಸಾಕಷ್ಟಿದೆ. ಎಂಬಿಬಿಎಸ್ ಆದ ನಂತರ ಎಂಡಿ/ಎಂಎಸ್, ಅದರ ನಂತರ ಡಿಎಂ/ಎಂಸಿಎಚ್ - ಹೀಗೆ ಇವೆಲ್ಲವಕ್ಕೂ ಮತ್ತಷ್ಟು ಲಕ್ಷಗಳನ್ನು ಸುರಿದು ಸೀಟು ದಕ್ಕಿಸಿಕೊಳ್ಳುವವರೂ ಬಹಳಷ್ಟಿದ್ದಾರೆ. ಇಷ್ಟೊಂದು ಹಣ ತೆತ್ತು ತಮ್ಮ ಮಕ್ಕಳನ್ನು ವೈದ್ಯಕೀಯ ವ್ಯಾಸಂಗಕ್ಕೆ ಸೇರಿಸುವಂತೆ ಹೆತ್ತವರನ್ನು ಪ್ರೇರೇಪಿಸುವ ಕಾರಣಗಳೇನಿರಬಹುದು? ಪ್ರತಿಷ್ಠೆಯೇ? ಗೌರವವೇ? ಹಾಕಿದ ಹಣಕ್ಕೆ ಮೋಸವಿಲ್ಲ ಎಂಬ ಧೈರ್ಯವೇ? ತಮ್ಮ ಮಕ್ಕಳು ಒಳ್ಳೆಯದನ್ನೇ ಕಲಿಯಲಿ ಎಂಬ ಹಂಬಲವೇ?

ನಿಮಗೇನನಿಸುತ್ತದೆ ಅಂತ ಮನಬಿಚ್ಚಿ ಬರೆಯಿರಿ. ಈ ಹಣದ ಭರಾಟೆಯಲ್ಲಿ ವೈದ್ಯಶಿಕ್ಷಣವು ಎತ್ತ ಸಾಗುತ್ತಿದೆಯೆಂದು ಮುಂದಕ್ಕೆ ಚರ್ಚಿಸೋಣ.

17 Sep11:46

ಲಕ್ಷಗಟ್ಟಲೆ...?

By deepnadig

ಹೆಚ್ಚ್ಚಿನ ಕಾಲೇಜುಗಳಲ್ಲಿ ಲಕ್ಷಗಟ್ಟಲೆ ತೆರಬೇಕಾದರೂ,
AIIMS ನಲ್ಲಿ ,DM/M.Ch ಗೆ ಈಗಲೂ tuition fees,Rs350 p.a (payable in two instalments).
ಅಲ್ಲಿನ ಕಲಿಕೆ, ಭಾರತದಲ್ಲಿ ಇನ್ನೂ no.1.

28 Sep08:04

ವಿಪರ್ಯಾಸ

By skakkilaya

ಇದೇ ವಿಪರ್ಯಾಸ! ಖಾಸಗಿ ಕಾಲೇಜುಗಳಲ್ಲಿ ಲಕ್ಷಗಟ್ಟಲೆಯಲ್ಲಿ ಶುಲ್ಕವಿದ್ದರೂ, ತರಬೇತಿಯ ಗುಣಮಟ್ಟವು ಅಷ್ಟಕ್ಕಷ್ಟೇ. ಹಾಗಿದ್ದರೂ ವಿದ್ಯಾರ್ಥಿಗಳೂ, ಅವರ ಹೆತ್ತವರೂ ಈ ಕಾಲೇಜುಗಳಲ್ಲಿ ಸೀಟಿಗಾಗಿ ಹಂಬಲಿಸುವುದೇಕೆ?

01 May12:32

ಹಣ,ಸ್ಥಾನಮಾನ ಮತ್ತು ಜನಪ್ರಿಯತೆಯ ಆಕರ್ಷಣೆ

By ashok

ತಜ್ಞ ವೈದ್ಯನೊಬ್ಬ ವಿಧಿಸಬಹುದಾದ ಶುಲ್ಕಕ್ಕೆ ಸ್ವತಃ ಆತನೇ ಮಿತಿ ಹಾಕಿಕೊಂಡಿರಬೇಕೇ ವಿನಃ ರೋಗಿ ಏನೂ ಹೇಳಲಾರ. ಎಷ್ಟು ದುಬಾರಿ ಅನಿಸಿದರೂ ಶುಲ್ಕವನ್ನು ಗಪ್‌ಚಿಪ್ ಎಂದು ಪಾವತಿಸುವುದು ಅತಿ ಸಾಮಾನ್ಯ.ಯಾವೆ ರೋಗಿಯೂ ವೈದ್ಯನಿಗೆ ಪಾವತಿಸದೆ ಕಡ ಹೇಳಿ ಹೋಗುವುದಿಲ್ಲ. ಚರ್ಚೆಯ ಮಾತೇ ಇಲ್ಲ.ಚೌಕಾಶಿ ನಡೆಯುವುದಿಲ್ಲ. ಕಲಿಯಲು ಹಾಕಿದ ಹಣವನ್ನು ಕೆಲವೆ ವರ್ಷಗಳಲ್ಲಿ ವಾಪಸ್ಸು ಪಡೆಯುವ ಖಾತರಿಯಿದೆ.ಜನರ ಪ್ರೀತಿ ಗೌರವಗಳಿಗೂ ಬರವಿಲ್ಲ. ರೋಗಿಯ ಬೆನ್ನು ತಟ್ಟಿ ಮಾತನಾಡಿಸಿದರೆ, ಆತ ವೈದ್ಯನ ಬಗ್ಗೆ ತಾಳುವ ಗೌರವ ಸ್ವಲ್ಪವಲ್ಲ. ರೋಗ ಗುಣವಾದಾಗ,ಅದರಲ್ಲಿ ವೈದ್ಯನ ಪಾಲು ಹೆಚ್ಚೇನೂ ಇಲ್ಲದೇ ಹೋದರೂ,ಅವರಿಗೆ ಸಿಕ್ಕುವ ಕ್ರೆಡಿಟ್ ಕಡಿಮೆಯಲ್ಲ.ರೋಗಿಯ ಬಗ್ಗೆ ನೈಜ ಕಾಳಜಿ ಹೊಂದಿ,ಅವರನ್ನು ಪ್ರೀತಿಯಿಂದ ಕಂಡು,ಅವರಿಗೆ ಧೈರ್ಯ ತುಂಬುವ ಮೂಲಕ ವೃತ್ತಿಜೀವನದಲ್ಲಿ ಸಾಫಲ್ಯವನ್ನು ಅನುಭವಿಸುವ ಅವಕಾಶ ಬೇರೆ ಇದೆ. ಇವೆಲ್ಲವೂ ಎಷ್ಟು ಹಣ ತೆತ್ತಾದರೂ ವೈದ್ಯ ಕಲಿಕೆಗೆ ಹೋಗುವಂತೆ ಜನರನ್ನು ಪ್ರೇರೇಪಿಸುತ್ತದೆ.

Post new comment

The content of this field is kept private and will not be shown publicly.
CAPTCHA
This question is for testing whether you are a human visitor and to prevent automated spam submissions.