Feed aggregator

ಡಿಟೆಕ್ಟಿವ್ ಪರೇಶ ಮತ್ತು ಕಾಲಿ ಡಬ್ಬ

ಸಂಪದ - Tue, 06/16/2009 - 01:56

ಗೊದಾಮಣಿ ಮದುವೆ ಫಿಕ್ಸ್ ಆಯ್ತು ಸಾರ್ ಮುಂದಿನ ತಿಂಗಳು ಮದುವೆ ಅಂತ ಸರೋಜಮ್ಮ ತನ್ನ ಮಗಳ ವಿಷ್ಯ ಹೇಳಿದಾಗ ನಾನು ತಕ್ಷಣ ಕೇಳಿದೆ ಅವಳು ಒಪ್ಪಿದಾಳ ಅಂತ. ಏನ್ಮಾಡೋದ್ ಸಾರ್ ಒಳ್ಳೆ ಗಂಡು ಸಿಕ್ಕಿದಾನೆ ಅವ್ನು ಒಳ್ಳೆ ಕಲ್ತಿದಾನೆ ದೊಡ್ಡ ಬಿಸಿನೆಸ್ ಮ್ಯಾನ್ ಸಾರ್. ಭದ್ರಾವತಿಯಲ್ಲಿ ದೊಡ್ಡ ಶೋ ರೂಂ ಇದೆಯಂತೆ ಸಾರ್ , ನೋಡಕ್ಕೂ ಚೆಂದ ಇದಾನ್ ಸಾರ್, ಅಂತ ಹೇಳಿ ಹೋದ್ರು .  ಮುಂದೆ ಓದಿ »

ನಮ್ಮ ಯಜಮಾನರಿಗೆ ಬುದ್ದಿ ಇಲ್ಲ ಕಣೇ

ಸಂಪದ - Tue, 06/16/2009 - 01:45

ನೀತು,,,, ನೋಡೇ ನಮ್ಮಯೇಜಮಾನರಿಗೆ ತೀರಾ ಬುದ್ದಿ ಇಲ್ಲ ಕಣೆ , ಒಂದೂ ಗೊತ್ತಾಗಲ್ಲ .
ಹೌದು ಕಣೇ ಸುನೀ,,,, ನಿನನ್ನ್ ಮದುವೆ ಆಗಿದ್ದಾರೆ ಅಂದಾಗ್ ಲೇ ಗೊತ್ತಾಯ್ತು ಅವ್ರಿಗ್ ಬುದ್ದಿ ಇಲ್ಲ ಅಂತ .
ಆದ್ರೆ ನೀತು ,,, ನಿನ್ನ್ ಯಜಮಾನ್ರು ತುಂಬ ಬುದ್ದಿವಂತ್ರು ಕಣೇ ,,, ಅದ್ಹೇಗೆ ?
ಅವ್ರು ದಿನಾ ನಂಗೆ ಎಸ್ ಎಂ ಎಸ್ / ಎಂ ಎಂ ಎಸ್ / ಇ ಮೇಲ್ / ರೋಜ್ಹ್ ಎಲ್ಲಾ ಕಳಸ್ತಾರೆ ಕಣೇ ,,,,,
!!!!!! ??????  ಮುಂದೆ ಓದಿ »

ಅಲಲಾ....ಬ್ರಹ್ಮ ಕಮಲ!

ಸಂಪದ - Tue, 06/16/2009 - 00:26

ಈ ಪ್ರಕೃತಿ ಮಾತೆ ತನ್ನ ಮಡಿಲೊಳಗೆ ಅದೆಷ್ಟು ವಿಸ್ಮಯಗಳನ್ನ ತುಂಬಿಕೊಂಡಿದೆಯೋ..?
ಯಾಕ್ ಈ ಪ್ರಶ್ನೆ ಅಂದ್ರೆ.. ಇಲ್ಲಿದೆ ನೋಡಿ ರಾತ್ರಿಲಿ ಮಾತ್ರ ಅರಳೋ ಹೂವು "ಬ್ರಹ್ಮಕಮಲ".. (ಇದಕ್ಕೆ ರಾತ್ರಿರಾಣಿ ಅಂಥಾನೂ ಹೆಸರಿದೆ ಅಂಥೆ...).

   ಮುಂದೆ ಓದಿ »

ನೆನಪಿನಾಳದಿಂದ....2,.....ಅಪ್ಪನ ಸಿಂಗಲ್ ನಂಬರ್ ಲಾಟರಿ ಖಯಾಲಿಯ ಕಥೆ.

ಸಂಪದ - Mon, 06/15/2009 - 23:48

1985 ರಿಂದ 2005 ರ ಸಮಯದಲ್ಲಿ ನಮ್ಮ ಘನ ಕರ್ನಾಟಕ ರಾಜ್ಯದಲ್ಲಿ ಎಲ್ಲಿ ನೋಡಿದರೂ ಸಿಂಗಲ್ ನಂಬರ್ ಲಾಟರಿ ಟಿಕೆಟ್ ಗಳ ಭರ್ಜರಿ ಮಾರಾಟ, ಎಲ್ಲೆಲ್ಲಿ ನೋಡಿದರಲ್ಲಿ ಜಾಹೀರಾತುಗಳು, ಅದೇನು ಮೋಡಿ,, ಅದೇನು ಕಥೆ. ಈಗ ನೆನಪಿಸಿಕೊಂಡರೆ ಮೈ ಜುಮ್ಮೆನ್ನಿಸುತ್ತದೆ, ಅದೆಷ್ಟು ಕುಟುಂಬಗಳು ಆ ದಿನಗಳಲ್ಲಿ ತಮ್ಮ ನೆಮ್ಮದಿಯನ್ನು ಕಳೆದುಕೊಂಡವೋ ?  ಮುಂದೆ ಓದಿ »

Profile ಅಂದರೆ ಏನರ್ಥ?

ಸಂಪದ - Mon, 06/15/2009 - 23:12

Profile ಅಂದರೆ ಏನರ್ಥ?
(ಸಾಮಾನ್ಯವಾಗಿ ಮುಖದ ಪಕ್ಕದ ಚಿತ್ರ ಎಂದರ್ಥ.)
ಆದರೆ ’ಸಂಪದ’ದಲ್ಲಿ ಪ್ರತಿಯೊಬ್ಬ ಸದಸ್ಯರು ತಿಳಿಸುವ ’Profile’ ಅರ್ಥ ಬೇರೆಯದು.
ಅ) ಒಬ್ಬರ ಅಥವ ಒಂದು ಸಂಸ್ಥೆಯ ಒಂದು ಸಂಕ್ಷಿಪ್ತ ಜೀವನ ಚರಿತ್ರೆಯ ರೂಪರೇಕೆ, ಚಿತ್ರರೇಕೆ.
ಇನ್ನೂ ನಿಖರವಾಗಿ ಒಬ್ಬ ಸಮಾಜದ ಪ್ರಸಿದ್ಧ ವ್ಯಕ್ತಿಯ ರೇಕಾಚಿತ್ರ.  ಮುಂದೆ ಓದಿ »

ವರ್ತೂರಣ್ಣನ ವರಾತ

ಸಂಪದ - Mon, 06/15/2009 - 22:08

ವರ್ತೂರು ಪ್ರಕಾಶ್‌. ಮಾಧ್ಯಮಗಳ ಪಾಲಿಗೆ ಫೈರ್‍ ಬ್ರಾಂಡ್‌. ಕೋಲಾರದ ಜನತೆಗೆ ಆಪದ್ಭಾಂದವ. ವತೂರು ಗ್ರಾಮ ಪಾಲಿಗೆ ವಂಚಕ. ಹೀಗೆ ಕೋಲಾರದ ಪಕ್ಷೇತರ ಶಾಸಕನಿಗೆ ಯಡಿಯೂರಪ್ಪ ಶಾಕ್‌ ನೀಡಿದೆ. ಸರ್ಕಾರದ ಈ ನಿರ್ಧಾರ ನಿರೀಕ್ಷಿತವಾದ್ರೂ ಪ್ರಕಾಶ್‌ರಿಗೆ ಅರಗಲು ಸ್ವಲ್ಪ ಕಾಲವಕಾಶ ಬೇಕೇ ಬೇಕು.  ಮುಂದೆ ಓದಿ »

ಪ್ರೀತಿಸುವೆ ನಿನ್ನ ಹೀಗೆ..

ಸಂಪದ - Mon, 06/15/2009 - 17:31

ಬಣ್ಣದ ಮಾತಿನಲಿ ಕೇಳಲು ಬರಲಿಲ್ಲ ನನಗೆ,
ಸಿಗಳು ಎಂದೆನಿಸಿದರೂ ಬರವಿಲ್ಲ ಒಲವಿಗೆ,
ನಾ ಮಣ್ಣಾದರೂ ಕೊನೆ ಇಲ್ಲ ಪ್ರೀತಿಗೆ,
ಸಾವಿರ ವರುಷಗಳೇ ಕಾದರೂ ಸುಖವಿದೆ ಈ ನೋವಿಗೆ!
ಆ ಸವಿ ಗಳಿಗೆ,
ಬರಬಹುದೇನೋ ಕೊನೆಗೆ,
ಪ್ರೀತಿಯಲ್ಲಿ ಇದ್ಯಾವ ಬಗೆ?!
ನಾ ಅರಿಯೇ, ಪ್ರೀತಿಸುವೆ ನಿನ್ನ ಹೀಗೆ..

-ಕಾರ್ತಿಕ್ ಕೆ. ಎಂ. ಗೌಡ

ಕೆಲವು ಮಾಹಿತಿಗಳು

ಸಂಪದ - Mon, 06/15/2009 - 09:16
  • ಬೆನ್ನು ಕೆಳಗೆ ಮಾಡಿ ಮಲಗುವ ಏಕೈಕ ಪ್ರಾಣಿಯೆಂದರೆ - ಮಾನವ.
  • ಹೆಣ್ಣು ಸೊಳ್ಳೆ ಒಂದು ವರ್ಷದಲ್ಲಿ ೧೫,೦೦,೦೦,೦೦೦ ಸೊಳ್ಳೆಗಳನ್ನು ಉತ್ಪತ್ತಿ ಮಾಡಬಲ್ಲದು.
  • ಒಂದು ಅಂಗುಲದಷ್ಟು ಮಣ್ಣು ನಿರ್ಮಾಣವಾಗಲು ೫೦೦ ರಿಂದ ೧೫೦೦ ವರ್ಷಗಳು ಬೇಕಾಗುತ್ತವೆ.
  • ಮಾನವನ ಮೂತ್ರ ಪಿಂಡದಲ್ಲಿ ಪ್ರತಿ ನಿಮಿಷಕ್ಕೆ ೧೨೦ ಮಿ.ಲೀ.
 ಮುಂದೆ ಓದಿ »

ಟ್ವೆಂಟಿ-20 ಚರಮಗೀತೆ

ಸಂಪದ - Mon, 06/15/2009 - 08:07

ಟ್ವೆಂಟಿ-20 ಇಂದ ಭಾರತ ಹೊರಕ್ಕೆ
ದೋನಿಯ ದೋಣಿ ಹೋಗಲಿಲ್ಲ ದಡಕ್ಕೆ
ಗೌತಮ್ ಗಂಭೀರ್ ಗಂಭೀರ್‍ವಾಗೇ ಆಡಿದ
ಸುರೇಶ್ ರೈನಾ ಮಾತ್ರ ಹುಡುಗಾಟ ಆಡಿದ
ರನ್‌ಗಳ ರೈನು ಸುರಿಸ್ಲಿಲ್ಲ ಆತ
ಎರಡೇ ರನ್ನಿಗೇ ಹೊಡೆದ ಗೋತಾ
ಜಡೇಜಾ, ಯುವರಾಜ ಪರವಾ ಇಲ್ಲ
ದೋನಿ, ಪಠಾಣ ಮಸ್ತ್ ಆಡಿದರಲ್ಲ
ಆದರೂ ಕೊನೇಲಿವರು ಯಶಸ್ವಿಯಾಗ್ಲಿಲ್ಲ
ಸೈಡ್‌ಬಾಟಮ್ ಫ್ರಂಟಲ್ಲಿ ಇವರಾಟ ನಡೀಲಿಲ್ಲ  ಮುಂದೆ ಓದಿ »

ಸವಾಲಿಗೆ ಜವಾಬ್!

ಸಂಪದ - Mon, 06/15/2009 - 04:53

ಸವಾಲಿಗೆ ಜವಾಬ್!  ಮುಂದೆ ಓದಿ »

ನನ್ನ ಕನಸಿನ ರಾಣಿ ಹೀಗಿರಬೇಕು

ಸಂಪದ - Mon, 06/15/2009 - 03:04

ನನ್ನ ಕನಸಿನ ರಾಣಿ ಹೀಗಿರಬೇಕು ,.
5'6' ಎತ್ತರವಿರಬೇಕು
ಅವಳ ಜೀನ್ಸ್ ಟೈಟ್ ಇರಬೇಕು
ಅವಳ ಮುಖ ಬ್ರೈಟ್ ಇರಬೇಕು
ಅವಳ ತೂಕ ಲೈಟ್ ಇರಬೇಕು
ವಯಸ್ಸಲ್ಲಿ ವೆತ್ಯಾಸ ಸ್ಲೈಟ್ ಇರಬೇಕು
ಸ್ವಲ್ಪ ಕ್ವೈಟ ಇರಬೇಕು ,.,. ನನ್ನ ಕನಸಿನ ರಾಣಿ ಹೀಗಿರಬೇಕು

ರಸ್ತೆಯಲ್ಲಿ ನಡೆಯುವಾಗ ಎಲ್ಲರು ಹೇಳಬೇಕು ಅಲ್ಲಿ ನೋಡಿ , ಅಲ್ಲಿ ನೋಡಿ ,
ಗುಂಪಲ್ಲಿ ಎಲ್ಲರೂ ಹೇಳಬೇಕು ದಾರಿ ಬಿಡಿ , ದಾರಿ ಬಿಡಿ,  ಮುಂದೆ ಓದಿ »

ನಗಬೇಕೋ ಅಳಬೇಕೋ ಸಂಪದಿಗರೇ ಹೇಳಬೇಕು.........

ಸಂಪದ - Sun, 06/14/2009 - 23:43

ಇದು ಇಂದು ಬೆಳಿಗ್ಗೆ ಎಂಟರ ಆಸು ಪಾಸಿನಲ್ಲಿ ನಡೆದ ಸ್ವಾರಸ್ಯಕರ ಘಟನೆ..  ಮುಂದೆ ಓದಿ »

"zindagi mein life" ಅನ್ನು ಒಪ್ಪಿದೋರಿಗೆ ಮಾರುಕಟ್ಟೆಯಲ್ಲಿ "ಬಿಸ್ಕೆಟ್" ಗ್ಯಾರೆಂಟಿ!

ಸಂಪದ - Sun, 06/14/2009 - 23:35

ಬ್ರಿಟಾನಿಯ ಕಂಪನಿ ಬಹಳ ಹೆಸರುವಾಸಿ.
ಈ ಕಂಪನಿಯು ತನ್ನ ವ್ಯಾಪಾರದ ಗುರುತನ್ನು (brand statement) "eat healthy, think better" ಅಂತ ಇಷ್ಟು ದಿನ ಇರಿಸಿಕೊಂಡಿತ್ತು.  ಮುಂದೆ ಓದಿ »

ಪ್ರಕೃತಿ ಸೊಭಗು

ಸಂಪದ - Sun, 06/14/2009 - 16:22

ಪ್ರಕೃತಿ ಸೊಭಗು

ಶಾಂತ ಶರಾವಳಿ ಪರ್ವತ ತುರಾಯಿ
ಪ್ರಶಾಂತ ಸುಳಿಗಾಳಿ ಮಂದಮಾರುತ ಹೊಯ್ಯಿ
ಗುಪ್ತ ಮಹಿಮೆಗಳ ಕಣಿವೆ ಪುಂಜ,
ಒರಟು ಕಲ್ಬಂಡೆ ಗುಡ್ಡಗಳ ಗುಂಜ,
ಉದಯಿಸಿ ಮೃದು ಬೆಳಕಿನ ಕಾಯಿ
ಧರಿಸಿ ಹಸಿರು ಸಸ್ಯರಾಶಿಯ ಭೂತಾಯಿ
ತುಂಬಿರುವಾಗ ಪ್ರತಿಭ ದೈವ ಪ್ರಕಾಶ ಧರೆಗೆ
ಉನ್ಮಾದ ಹೃದಯ ವಿಕಶಿತ ವೀಕ್ಷಣ ಧಾರೆಗೆ
- (ಜೆರ್ಮನ್ ಕಾವ್ಯದ ಭಾವಾನುವಾದ)
- vijayasheela

ಬಾಳಿನ ವಿರೋದೋಕ್ತಿ

ಸಂಪದ - Sun, 06/14/2009 - 07:31

ಬಾಳಿನ ವಿರೋದೋಕ್ತಿ

ಸಮುದ್ರಕ್ಕಿಳಿದರೂ ಮಂಡಿಯವರೆಗೆ ನೀರು!
ಅದು ಸ್ವಯಂವಿರೋದೋಕ್ತಿ ವಿಧಿಯ ತೋರು.
ತಿರುಪತಿಗ್ಹೋದರೂ ದೊರಕದೆ ಮೋಕ್ಷ!
ಸ್ವರ್ಗದಲು ದೈವಮಾರ್ಗ ಅನಿರೀಕ್ಷ?
*
ಕಾರಣಕರ್ತನ ಮಾಯೆಯೆ, ಕಾರಣವೇನು?
ಹೂತೋಟದಲಿ ಕುರುಡನ ನೋಟವೇನು?
ಸರ್ವರಿಗಿರದು ಸರಿಸಮಾನ ಮಟ್ಟ
ಅದಾವ ವಿಧಿಯಾಟ ಅದಾವತೆರನ ದಿಟ?
*
ಎಲ್ಲವು ಇರುವ ಕಡೆ ಏನಿಲ್ಲದೆ ತಡೆ,  ಮುಂದೆ ಓದಿ »

ತರುಗಳ ಹಿತೈಶಿಗಳು

ಸಂಪದ - Sun, 06/14/2009 - 07:21

ತರುಗಳ ಹಿತೈಶಿಗಳು

ಮರಗಳ ಹಿತೈಶಿಗಳು ಕೇವಲ ಕೆಲವರು,
ಮಾರುತ ಮಳೆಗಾಳಿ ಫಲವತ್ತಿನ ನೆಲ ಪ್ರಕೃತಿ.
ಅತಿಮಿತಿ ಜನ ಭೃಂದಾವನ ಪ್ರೇಮಪರರು,
ಅತ್ಯಂತ ಮೂಢಜನವೃಂದಕೆ ನಾಶನ ಶಿರಮತಿ!
ರಾಜ್ಯಾಡಳಿತ ಪಾರುಪತ್ಯರು ದೇಶ ಧುರಂಧರರೂ!

ಇರವಿನ ರೀತಿನೀತಿ ಪ್ರಕೃತಿ ಪ್ರೀತಿಭೀತಿ
ಅರಿಯಲನರ್ಹರು ನಿಸರ್ಗ ನಿಯಮದೊಲವು!
ಗೊತ್ತುಗುರಿ ಸಮಾಜದ್ಹೊಣೆ ಭವಿಷ್ಯಗತಿ  ಮುಂದೆ ಓದಿ »

Syndicate content