ಸಂಪದ

Syndicate content
ಸಂಪದ ಅಂತರ್ಜಾಲದಲ್ಲಿ ಕನ್ನಡಿಗರ ಬಹು ದೊಡ್ಡ ಸಮುದಾಯ. ಮುಕ್ತ ಚರ್ಚೆ ಹಾಗೂ ಬರಹಗಳ ಆಗರ. Sampada is a portal that caters to Kannadigas, the Kannada people around the world.
Updated: 1 year 9 weeks ago

ಇದನ್ನು ತಿಂದರೆ ನಂಬರ್‌ ೨ ಸಮಸ್ಯೆ ಮಾಯ!

Thu, 06/18/2009 - 07:17

ಬೆಳಿಗ್ಗೆ ಉಲ್ಲಸಿತರಾಗಿ ಏಳಬೇಕೆಂದರೆ, ರಾತ್ರಿ ಊಟದಲ್ಲಿ ಈ ಸೊಪ್ಪನ್ನು ತಿಂದರೆ ಬೆಸ್ಟು ಅಂತಾರೆ ಹಳ್ಳಿ ಜನ.

ಈ ಸೊಪ್ಪಿಗೆ ದಕ್ಷಿಣ ಕರ್ನಾಟಕದ ಕಡೆ ಏನು ಹೇಳುತ್ತಾರೋ ತಿಳಿಯದು. ಉತ್ತರ ಕರ್ನಾಟಕದ ಕಡೆ ಹಕ್ಕರಕಿ ಅಂತಾರೆ. ಚೂಪು ತುದಿಯುಳ್ಳ ಉದ್ದನೆಯ ಎಲೆಗಳು ಹೂವಿನ ದಳಗಳಂತೆ ಹರಡಿಕೊಂಡಿರುವ ಮಬ್ಬು ಹಸಿರಿನ ಸೊಪ್ಪಿದು.

ಕಪ್ಪು ಮತ್ತು ಕೆಂಪು ಮಣ್ಣಿನ ಭೂಮಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಸ್ಯ ಹಕ್ಕರಕಿ. ತಿಳಿ ಹಸಿರು ಬಣ್ಣದ ಉದ್ದನೆಯ ಎಲೆಗಳು ಒತ್ತೊತ್ತಾಗಿ ನಕ್ಷತ್ರಾಕಾರವಾಗಿ ಹರಡಿಕೊಂಡು ಬೆಳೆಯುತ್ತವೆ. ಭೂಮಿಯನ್ನು ಆವರಿಸಿಕೊಂಡು ಬೆಳೆಯುವ ಹಾಗೂ ವರ್ಷದ ಎಲ್ಲಾ ಕಾಲಗಳಲ್ಲಿ ಕಂಡುಬರುವ ಸಸ್ಯ ಇದು.

ಅಪರೂಪದ ಔಷಧೀಯ ಗುಣಗಳಿವೆಯೆಂದು ಹೇಳಲಾಗುವ ಹಕ್ಕರಕಿಯನ್ನು ಯಾರೂ ನೆಟ್ಟು ಬೆಳೆಸುವುದಿಲ್ಲ. ಇದು ತಾನೆ ತಾನಾಗಿ ಕಂಡುಬರುವ ಒಂದು ರೀತಿಯ ಕಳೆ. ಡಯಾಬಿಟೀಸ್, ಮಲಬದ್ಧತೆ, ಪಿತ್ತ, ಕಣ್ಣು ನೋವು ಮುಂತಾದ ರೋಗಗಳಿಗೆ ಇದರ ಎಲೆ ಉತ್ತಮ ಔಷಧಿ ಎಂದು ಹೇಳುವವರಿದ್ದಾರೆ.  ಮುಂದೆ ಓದಿ »

ಕೆಸರಿನಲ್ಲಿ ಮುಳುಗೆದ್ದ ರಾಯ್ದು

Thu, 06/18/2009 - 02:54

ಒಂದು ದಿನ ಮದ್ಯಾಹ್ನ ನಾನು ಮನೆಗೆ ಬರುತ್ತಿದ್ದಾಗ ನಮ್ಮ ಬಿ. ಹೆಚ್. ರೋಡ್ ನಲ್ಲಿರುವ ವಿನಾಯಕ ಟಾಕಿಸ್ ಪಕ್ಕದಲ್ಲಿರುವ ಲಾರಿ ಸ್ಟ್ಯಾಂಡ್ ಹತ್ತಿರ ದೊಡ್ಡ ಜನ ಸಮೂಹ ಆಚೆ ಈಚೆ ಓಡುತ್ತಿದ್ದರು.  ಮುಂದೆ ಓದಿ »

ಮಾನವ ನಿರ್ಮಿತ ಅದ್ಭುತಗಳು - ೧

Thu, 06/18/2009 - 00:21

ಮಾನವ ನಿರ್ಮಿತ ಅದ್ಭುತಗಳು

ಸುಮಾರು ನೂರು ಮೈಲು ದೂರದ ಭೂಮಿ ಅಗೆದು ಸೂಯೆಜ್ ಕಾಲುವೆ ನಿರ್ಮಿಸುವ ಪ್ರಸ್ತಾಪ ಬಂದಾಗ, ಅದನ್ನು ಕೇಳಿದವರು "ಏನು? ಹಾರೆ ಗುದ್ದಲಿಗಳಿಂದ ನೂರು ಮೈಲು ಕಾಲುವೆ ಅಗೆಯಲು ಸಾಧ್ಯವೇ?" ಎಂದು ಪ್ರತಿಕ್ರಿಯೆ ಸೂಚಿಸಿದರಂತೆ. ಆದರೆ ಇಂದು ಸೂಯೆಜ್ ಕಾಲುವೆಯಲ್ಲಿ ಹಡಗುಗಳು ಸಂಚರಿಸುತ್ತಿವೆ ಎಂದರೆ ಮಾನವ ತನ್ನ ಶ್ರಮದಿಂದ ಕಷ್ಟಸಾಧ್ಯವೆನಿಸುವುದನ್ನೂ ಸಾಧಿಸಬಹುದು ಎಂದು ಸಾಬೀತು ಪಡಿಸಿದ್ದಾನೆ ಎಂದಾಗುತ್ತದೆ ಅಲ್ಲವೇ?

ಹಿಂದಿನದಕ್ಕಿಂತ  ದೊಡ್ಡದಾದ ಮತ್ತೊಂದನ್ನು ತಮ್ಮ ಕಾಲದಲ್ಲಿ ನಿರ್ಮಿಸಬೇಕು ಎಂಬ ಮಹತ್ವಾಕಾಂಕ್ಷೆ ಪ್ರಾಯಶಃ ಎಲ್ಲ ಕಾಲದ ಜನರಲ್ಲೂ ಇತ್ತೆಂದು ಹೇಳಬಹುದು. ಹಲವು ಸಾವಿರ ವರ್ಷಗಳ ನಂತರವೂ ನಮ್ಮ ಮಧ್ಯೆ ಉಳಿದಿರುವ, ನಮ್ಮ ಕುತೂಹಲಕ್ಕೂ,, ಅಚ್ಚರಿಗೂ ಕಾರಣವಾಗಿರುವ ಹಲವು ಅದ್ಭುತ ರಚನೆಗಳು ಇದಕ್ಕೆ ಹೇಳಿ ಮಾಡಿಸಿದಂತಿವೆ.  ಮುಂದೆ ಓದಿ »

ಅವರಿವರ ಭಯಾಗ್ರಫಿ -2

Wed, 06/17/2009 - 22:04

ಕ್ರಿಕೆಟ್ ಕಲಿಸಿದ ಪಾಠ

ಗ್ರೀಸ್ ದೊರೆ ಎರಡನೆಯ ಜಾರ್ಜ್ ಶಾಲೆಯಲ್ಲಿ ಕ್ರಿಕೆಟ್ ಆಡುವಾಗ ಒಮ್ಮೆ ಮೊದಲ ಎಸೆತಕ್ಕೆ ಬೌಲ್ಡ್ ಆಗಿದ್ದರು. ಆ ಘಟನೆಯನ್ನು ಆತ ಎಂದಿಗೂ ಮರೆಯಲಿಲ್ಲ. ಅದು ಆತನಿಗೆ ಜರ್ಮನ್ ಸೇನೆಯ ಅತಿಕ್ರಮಣದ ದಿನಗಳಲ್ಲಿನ ಬಡತನದ ಅಜ್ಞಾತವಾಸದ ಜೀವನವನ್ನು ಸಹನೀಯವಾಗಿಸಿತ್ತು ಎಂದು ಆತ ನೆನಪಿಸಿಕೊಳ್ಳುತ್ತಾನೆ.  ಮುಂದೆ ಓದಿ »

ಬರೀ ಪ್ರೇಮ

Wed, 06/17/2009 - 20:24

ಹೃದಯ ದನಿಗೂಡಿದಾಗ ಮಿದುಳು ಮೌನಿ
ಪ್ರೇಮ ಚಿಗುರಿದಾಗ ಕೂದಲು ನರೆತಿದ್ದೋ, ಕಪ್ಪೋ
ಮನಸ್ಸು ಅ೦ಧ.
ಭಾವನೆಗಳ ಬುಗ್ಗೆ ಚಿಮ್ಮಿದಾಗ
ಜನಿವಾರವೋ, ಲಿ೦ಗವೋ
ಮ೦ದಿರವೋ, ಮಸೀದಿಯೋ
ಅಸ್ತಿತ್ವ ಅರಿಯದ ಅಜ್ಞಾನಿ
ದೇಹಾತ್ಮಗಳು ಬೆಸೆತಾಗ
ನಿಜಕ್ಕೂ ಈ ಜಗತ್ತೇ ಮಾಯೆ (ಮಾಯ)
ನಾನು ನೀನು
ಏನೂ ಇಲ್ಲ ಇಲ್ಲಿ.
ಉಳಿಯುವುದು ಬರೀ
ಪ್ರೇಮ ಮಾತ್ರ...

*****

ಕ್ರಾಪಿಂಗ್ - ಒಂದು ಉದಾಹರಣೆ

Wed, 06/17/2009 - 19:15

ಛಾಯಾಗ್ರಹಣದಲ್ಲಿ ಬೆಳಕಿನ ಉಪಯೋಗ ಹೇಗೆ ಪ್ರಮುಖವೋ ಅಂತೆಯೇ ಸಂಯೋಜನೆಯೂ ಕೂಡ. ಈ ಹಿಂದೆ ಚಿತ್ರ ಸಂಯೋಜನೆಯ ಬಗ್ಗೆ ಇಲ್ಲಿ ಬರೆದಿದ್ದೇನೆ. ಇದೇ ನಿಯಮಗಳನ್ನು ಮನದಲ್ಲಿರಿಸಿ ನಾವು ತೆಗೆಯ ಹೊರಟ ಚಿತ್ರದ ಪರಿಣಾಮ ನೋಡುಗರ ಮನದಲ್ಲಿ ಹೇಗೆ ಪರಿಣಾಮಕಾರಿಯಾಗಿ ಚಿತ್ರಿಸಬಹುದು ಎಂದು ಉದಾಹರಣೆಯ ಮೂಲಕ ನೋಡೋಣ.

 ಮುಂದೆ ಓದಿ »

ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು?!

Wed, 06/17/2009 - 16:06

ಮಗಳನ್ನು ಹಾಸ್ಟೆಲಿಗೆ ಕಳುಹಿಸಿ ನಾವಿಲ್ಲಿ ಹೇಗೆ ಇರುವುದು
ಈ ಪ್ರಶ್ನೆ ಈ ಮುಂಜಾನೆ ನನ್ನ ಮಗಳಬ್ಬೆ ನನ್ನ ಕೇಳಿದ್ದು

ಮಗಳ ಜೊತೆಗೆ ನೀನೂ ಹೋಗಿರು ಮತ್ತೇನು ಮಾಡಲಾದೀತು
ನೀವು ಒಂಟಿ ಹೇಗಿರುವಿರಿ ಇಲ್ಲಿ ಅಂದರೆ ಏನು ಹೇಳಲಾದೀತು

ಮಗಳ ಮೇಲೆ ಮಮತೆ ನಿನಗೆ ನನ್ನ ಮೇಲೆ ಪ್ರೀತಿ ಇಹುದು
ಎಲ್ಲರೂ ಜೊತೆಗಿರಲೆಮ್ಮ ಮೇಲೆ ದೇವರ ದಯೆ ಎಲ್ಲಿಹುದು  ಮುಂದೆ ಓದಿ »

ಸಂಪದ ನನಗೇಕೆ ಮುದ ನೀಡಬೇಕು?

Wed, 06/17/2009 - 09:16

ಸಂಪದ ಎಂದರೆ ನಾವು. ಸಂಪದ ನಮ್ಮದು.ಅದು ನಮಗೆ ಮುದ ನೀಡುವುದು ಹೇಗೆ?

ಅದು ನಮಗೆ ಮುದ ನೀಡುವ ಸಾಧನವಲ್ಲ. ಸಂಪದಕ್ಕೆ ನಾವು ಮುದ ನೀಡಬೇಕು.

ಒಳ್ಳೆಯ ಲೇಖನಗಳು ಬರುತ್ತಿಲ್ಲ ಅನ್ನುವ ಮಾತೂ ಇದೆ. ಒಳ್ಳೆಯ ಕೆಲಸ ನಾನೇ ಏಕೆ ಮಾಡಬಾರದು? ಎಲ್ಲವನ್ನೂ ಅನ್ಯರೇ ಮಾಡಬೇಕೆಂಬ ನಿರೀಕ್ಷೆ ಏಕೆ?  ಮುಂದೆ ಓದಿ »

ಫೆಡೋರ-೧೧: ಇಂಸ್ಟಾಲರ್ ತೊಂದರೆಗಳು

Wed, 06/17/2009 - 09:07

ನಿನ್ನೆ ಹೊಸತಾಗಿ ಫೆಡೋರಾ-೧೧ ಸ್ಥಾಪಿಸಲು ಹೋದಾಗ, ಪಾರ್ಟಿಶನ್ ಮಾಡುವ ಸಮಯದಲ್ಲಿ "PartitionException" ಬಂತು.

"This may be bug in installer. Report to Redhat bugsite" ಅಂತ ಸೂಚನೆ ನೀಡಿತು. ನಾನು ಈ ಕೆಳಕಂಡ ಆಪ್ಶನ್ ಪ್ರಯತ್ನಿಸಿ ನೋಡಿದೆ.

1) Delete existing linux system and create default layout
2) Use free spcae and create default layout
3) Create custom layout  ಮುಂದೆ ಓದಿ »

ಟ್ವೆಂಟಿ20: ಪೋಸ್ಟ್ ಮಾರ್ಟಮ್

Wed, 06/17/2009 - 08:41

ಗಬ್ಬರ್ ಸಿಂಗ್ ಹೇಳ್ತಾನೆ ಷೋಲೆ ಫಿಲಂನಲ್ಲಿ,
’ತೀನೋ ಬಚ್ ಗಯೇ!’
ಆಡಿದ್ದು ಮೂರಾಟ ಸೂಪರ್ ಎಯ್ಟ್‌ನಲ್ಲಿ,
’ತೀನೋ ಹಾರ್ ಗಯೇ!’

ಗಬ್ಬರ್ ಸಿಂಗ್ ಕುದೀತಿದ್ದ,
ಅವನ ಬಂಟರು ಔಟ್!
ಮಹೇಂದ್ರ ಸಿಂಗ್ ಜಾರಿಬಿದ್ದ,
ಅವನ ಟೀಮೇ ಔಟ್!

ಪಾಕ್, ಶ್ರೀಲಂಕಾ ಪಾಸಾದವು,
ಭಾರತ ಮಾತ್ರ ಫೇಲಾಯ್ತು!
ಪುಟಗೋಸಿ ದೇಶಗಳು ಮೆರೆದವು,
ಮಹಾನ್ ಭಾರತ ಸೊರಗಿತು!

ಇದು ಈ ಸಲದ ಟ್ವೆಂಟಿ20 ಯಲ್ಲಿ  ಮುಂದೆ ಓದಿ »

ಓದಿದ್ದು ಕೇಳಿದ್ದು ನೋಡಿದ್ದು-279 ಬಿಜೆಪಿಗೆ ಹೀಗೆ ಪ್ರಚಾರ ಸಿಕ್ಕೋದನ್ನು ತಡೆಯಲೇಬೇಕು!

Wed, 06/17/2009 - 05:59

 

 

(IE)

----------------------------------------------------

(kannadaprabha)

--------------------------------------

(vk)

-------------------------------  ಮುಂದೆ ಓದಿ »

ತಾಳುವಿಕೆಗಿಂತನ್ಯ ತಪವು ಇಲ್ಲ

Wed, 06/17/2009 - 03:13

ಕೊಡುವುದಕಿಂತಲೂ ಬೇರೆ ಸಿರಿಯಿಲ್ಲ
ದಿಟವಾಡುವುದಕಿಂತ ನೋಂಪಿ ಮೊದಲಿಲ್ಲ
ನಡತೆ ಒಳ್ಳಿತಿರೆ ಒಸಗೆ ಬೇರೆ ಬೇಕಿಲ್ಲ
ತಾಳ್ಮೆಗೂ ಮೀರುವ ಸೇರಿಕೆಯು ಇಲ್ಲ

ಸಂಸ್ಕೃತ ಮೂಲ - (ಚತುರ್ವರ್ಗ ಸಂಗ್ರಹ ೧-೧೦)

ನ ದಾನತುಲ್ಯಂ ಧನಮನ್ಯದಸ್ತಿ
ನ ಸತ್ಯತುಲ್ಯಂ ವ್ರತಮನ್ಯದಸ್ತಿ |
ನ ಶೀಲತುಲ್ಯಂ ಶುಭಮನ್ಯದಸ್ತಿ  ಮುಂದೆ ಓದಿ »

ಮಳೆ ಮತ್ತು ಬೋಂಡ........

Tue, 06/16/2009 - 23:56

ಮಳೆಗಾಲ ಶುರುವಾಯ್ತು. ಮಳೆಗಾಲದ ಬಗ್ಗೆ ನೆನೆದಾಗಲೆಲ್ಲ ಮತ್ತು ಮಳೆಯಲ್ಲಿ ನೆನೆದಾಗಲೆಲ್ಲ ಬಹಳವಾಗಿ ನೆನಪಾಗುವುದು ಅಮ್ಮನ ಕೈಯ ಬೋಂಡ, ಬಜ್ಜಿ ಅಥವಾ ಪಕೋಡ. ಮಳೆಗಾಲದಲ್ಲಿ ಶಾಲೆಯಿಂದ ಬಂದೊಡನೆ ಅಡುಗೆಯ ಮನೆಯತ್ತಲೇ ನಮ್ಮ ಗಮನ ಬಹಳವಾಗಿ ಹರಿಯುತ್ತಿತ್ತು. ಏನೋ ಘಮ್ಮೆಂದು ವಾಸನೆ ಬಂದೊಡನೆಯೇ, ಅಮ್ಮ ನಮಗಾಗಿಯೇ ಏನೋ ತಯಾರಿಸಿದ್ದಾಳೆಂದು ಬಹಳ ಸಂತೋಷವಾಗುತ್ತಿತ್ತು.  ಮುಂದೆ ಓದಿ »

ಇಂದಿನ ಮಕ್ಕಳು ನಾಳಿನ.....?

Tue, 06/16/2009 - 20:17

ನನ್ನ ಮಕ್ಕಳಿಬ್ಬರು ಒಬ್ಬರಿಗಿಂತಾ ಒಬ್ಬರು.....?(ಏಕ್ ಸೆ ಬಡ್ಕರ್ ಏಕ್) ಊಹ್, ಏನ್ ಪದ ಬರೀಬೇಕಂತ ಗೊತಾಗ್ತಾ ಇಲ್ಲ! ನನ್ನ ಮಕ್ಕಳು ಮಾತ್ರ ಅಲ್ಲ ಈಗಿನ , ಈ ತಲೆಮಾರಿನ ಮಕ್ಕಳೇ ಹಾಗೆ....  ಮುಂದೆ ಓದಿ »

ಸಂಪದಕ್ಕೆ ವಿದಾಯ ಹೇಳಲೇ?

Tue, 06/16/2009 - 19:40

ಇತ್ತೀಚೆಗೇಕೋ ನಿರಾಸಕ್ತಿ ಮನಸ್ಸಿಗೆ ಕಾಡುತ್ತಿದೆ. ಮೊದಲಿನಂತೆ ಚಟುವಟಿಕೆಯಲ್ಲಿ ಸಂಪದದಲ್ಲಿ ತೊಡಗಿಕೊಳ್ಳುವುದು ಕೂಡಾ ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡವೋ, ಬರಿಯ ಆರಂಭಶೂರತ್ವವಿತ್ತೋ ಗೊತ್ತಿಲ್ಲ! ಹೆಚ್ಚು ಕಮ್ಮಿ ೮ - ೯ ಗಂಟೆಗಳು ಆನ್ಲೈನ್ ನಲ್ಲಿ ಸಂಪದದಲ್ಲಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದೆ, ಬ್ಲಾಗ್ ಗಳನ್ನು ಬರೆಯುತ್ತಿದ್ದೆ!  ಮುಂದೆ ಓದಿ »

ಕೊಂಕಣಿಗಳು ಮತ್ತು ಸಂಘನಿಷ್ಟೆ

Tue, 06/16/2009 - 19:20

ದಕ್ಷಿಣ ಕನ್ನಡದಲ್ಲಿ ಕಳೆದ ಎರಡು ವರ್ಷಗಳಿಂದ ಆಗುತ್ತಿರುವ ಸಾಮಾಜಿಕ, ರಾಜಕೀಯ ಮತ್ತು ಕೋಮು ಸಂಬಂಧಿ ಸ್ಥಿತ್ಯಂತರಗಳ ಹಿನ್ನೆಲೆಯಾಗಿ ಪತ್ರಿಕೆಗಳಲ್ಲಿ, ವೆಬ್ಸೈಟುಗಳಲ್ಲಿ ಪ್ರಕಟವಾಗಿರುವ ವಿಶ್ಲೇಷಣೆಗಳಲ್ಲಿ ಹಲವು ಬರಹಗಳು ನನ್ನ ಈ ಬರಹವನ್ನು ಪ್ರೇರೇಪಿಸಿದೆ. ಅವುಗಳನ್ನು ಬರಹದ ಮೊದಲಿಗೆ ಉಲ್ಲೇಖಿಸಬಯಸುತ್ತೇನೆ.

೧. ಸಂವಾದ ಪತ್ರಿಕೆಯ ೨೦೦೬ರ ಡಿಸೆಂಬರ್ ಸಂಚಿಕೆಯಲ್ಲಿ ಪ್ರಕಟವಾದ ಡಾ.ವಿ.ಲಕ್ಷ್ಮೀನಾರಾಯಣ ಅವರ ಕರಾವಳಿ ಕೋಮು ಸಂಘರ್ಷದ ಸುತ್ತ ಎನ್ನುವ ಲೇಖನ. ಇದರ ಉಧೃತ ಭಾಗ:
ಕರ್ನಾಟಕದ ಇತೆರೆಡೆಯ ಮುಸ್ಲಿಮರಂತೆ ಕರಾವಳಿಯ ಮುಸ್ಲಿಮರು ತೀರ ಬಡತನ ಹಾಗೂ ಭೂಹೀನತೆಯಿಂದ ಪರದಾಡುತ್ತಿಲ್ಲ. ತಮ್ಮ ಕುಶಲಕರ್ಮಿಕಾಯಕ ಮತ್ತು ವ್ಯಾಪಾರದಿಂದ ಹಿಂದೂ ವ್ಯಾಪಾರಿಗಳ ಮುಖ್ಯವಾಗಿ ಕೊಂಕಣಿಗಳ ಅಧಿಪತ್ಯಕ್ಕೆ ಸವಾಲೆಸೆದಿರುವುದರಿಂದ ಎರಡೂ ವ್ಯಾಪಾರಿ ಸಮುದಾಯಗಳ ನಡುವೆ ಪೈಪೋಟಿಗಳೇ ಕೋಮುವಾದದ ಮೂಲವಾಗಿ ಪರಿಣಮಿಸಿವೆ.  ಮುಂದೆ ಓದಿ »

ಚಳವಳಿಯೋ ಅಥವಾ ಚಳುವಳಿಯೋ

Tue, 06/16/2009 - 19:14

ಸ್ನೇಹಿತರೇ, ಇತ್ತೀಚೆಗೆ ಎಲ್ಲಾ ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಎಲ್ಲಾಕಡೆಗಳಲ್ಲಿ 'ಚಳವಳಿ' ಅಂತ ಬಳಸ್ತಾ ಇದ್ದಾರಲ್ಲ "ಏಕೆ ಹೀಗಾಯ್ತೋ ನಾನು ಕಾಣೆನೋ", ನಾವೆಲ್ಲಾ ಚಿಕ್ಕವರಿದ್ದಾಗ ನಮ್ಮ ಪಠ್ಯ ಪುಸ್ತಕಗಳಲ್ಲಿ ನಾವು ಕಲಿತಿದ್ದು 'ಚಳುವಳಿ' ಅನ್ನೋ ಪದ... ಆದ್ರೆ ಇದೀಗ ಆ ಪದ ತನ್ನ ಕೊಂಬನ್ನು ಕಳೆದುಕೊಂಡು 'ಚಳವಳಿ' ಆಗಿ ದ್ದೀಯಲ್ಲ!!!!! ಯಾಕೆ?  ಮುಂದೆ ಓದಿ »