ಹೊಸ ನೋವು ನಿವಾರಕಗಳ ಬಗೆಗಿನ ಅಧ್ಯಯನಗಳಲ್ಲಾದ ಮೋಸಗಳ ಬಗ್ಗೆ
ನೋವು ನಿವಾರಕಗಳ ನೋವಿನ ಕಥೆಯಲ್ಲಿ ಬರೆದಿದ್ದೆ. ಇದರ ಮುಂದುವರಿದ ಭಾಗವೇನೋ ಎನ್ನುವಂತೆ, ವೈದ್ಯಕೀಯ ಪತ್ರಿಕಾ ಪ್ರಕಾಶನದ ದೈತ್ಯನಾದ ಎಲ್ಸಿವಿಯರ್ ಸಂಸ್ಥೆಯು ನಕಲಿ ವೈದ್ಯಕೀಯ ಪತ್ರಿಕೆಗಳ ಹೆಸರಲ್ಲಿ ಕೆಲವು ಔಷಧ ಕಂಪೆನಿಗಳಿಗಾಗಿ ಲೇಖನಗಳನ್ನು ಪುನರ್ ಮುದ್ರಿಸಿ ಕೊಟ್ಟ ಹಗರಣವು ಬಯಲಾಗಿದೆ. ಆರು ನಕಲಿ ಪತ್ರಿಕೆಗಳ ಹೆಸರಿನಲ್ಲಿ (ಆಸ್ಟ್ರೇಲೇಷ್ಯಾ ಜರ್ನಲ್ ಗಳೆಂಬ ಶಿರೋನಾಮೆಯಲ್ಲಿ) ಲೇಖನಗಳನ್ನು ಮುದ್ರಿಸಿ, ವೈದ್ಯಕೀಯ ಸಮುದಾಯದಲ್ಲಿ ಹಂಚುವುದಕ್ಕಾಗಿ ಔಷಧ ಕಂಪೆನಿಗಳಿಗೆ ಒದಗಿಸಲಾಗಿತ್ತೆಂದು ಎಲ್ಸಿವಿಯರ್ ಸಂಸ್ಥೆಯು ಒಪ್ಪಿಕೊಂಡಿದೆ. ತಮ್ಮ ಔಷಧಗಳ ಮಾರಾಟಕ್ಕಾಗಿ ವೈದ್ಯರನ್ನು ಪ್ರೇರೇಪಿಸಲು ಔಷಧ ತಯಾರಕ ಕಂಪೆನಿಗಳೂ, ಅವುಗಳಿಂದ ಪಡೆಯುವ ಹಣದಾಸೆಗಾಗಿ ವೈದ್ಯಕೀಯ ಪತ್ರಿಕೆಗಳ ಪ್ರಕಾಶಕರೂ ಅದೆಂತಹಾ ಕೀಳು ಮಟ್ಟಕ್ಕೂ ಇಳಿಯಬಲ್ಲರೆನ್ನುವುದಕ್ಕೆ ಇನ್ನೊಂದು ಸ್ಪಷ್ಟವಾದ ಉದಾಹರಣೆ ಇದಾಗಿದೆ.
ವಿವರವಾದ ಲೇಖನ ಇಲ್ಲಿದೆ:
Elsevier published 6 fake journals - ದಿ ಸೈಂಟಿಸ್ಟ್ ಲೇಖನ (ಉಚಿತ ನೋಂದಾವಣೆ ಅಗತ್ಯ)
Post new comment