ಸದೃಶ ಇನ್ಸುಲಿನ್ ಲಾಂಟಸ್ ನಿಂದ ಕ್ಯಾನ್ಸರ್ ಅಪಾಯ

ಸದೃಶ ಇನ್ಸುಲಿನ್ ಗಳೆಂಬ ನಿಸರ್ಗ ವಿರೋಧಿಯಾದ, ಅಮಾನವೀಯವಾದ ಉತ್ಪನ್ನಗಳ ಬಗ್ಗೆ ಈ ಹಿಂದೆ ಬರೆದಿದ್ದೆ. ಹಲವು ವೈದ್ಯರು ಇಂದು ಬೇಕಾಬಿಟ್ಟಿಯಾಗಿ ಬರೆಯುತ್ತಿರುವ ಲಾಂಟಸ್ ಎಂಬ ಹೆಸರಿನ ಸದೃಶ ಇನ್ಸುಲಿನ್ ಕ್ಯಾನ್ಸರಿಗೆ ಕಾರಣವಾಗಬಹುದೆನ್ನುವ ವಿಚಾರವು ಆರಂಭದ ಅಧ್ಯಯನಗಳಲ್ಲೇ ಕಂಡುಬಂದಿತ್ತಾದರೂ, ಅಂತಹಾ ವರದಿಗಳನ್ನು ಬದಿಗೊತ್ತಿ ಅದನ್ನು ಮಾರುಕಟ್ಟೆಗೆ ತರಲಾಗಿತ್ತು. ಲಾಂಟಸ್ ನಿಂದ ಕ್ಯಾನ್ಸರ್ ಉಂಟಾಗುವ ಅಪಾಯವಿದೆಯೆಂದು ಸೂಚಿಸುವ ಇನ್ನಷ್ಟು ವರದಿಗಳು ಇದೀಗ ಹೊರಬಿದ್ದಿವೆ. [1-3]  read more »

ಮಾರುಕಟ್ಟೆಯಿಂದ ಮಾಯವಾದ ಪ್ರಾಣಿಜನ್ಯ ಇನ್ಸುಲಿನ್: ಕೇಂದ್ರ ಸಚಿವರಿಗೆ ಮನವಿ

ಮಾನವ ಇನ್ಸುಲಿನ್ ಎಂಬ ಮಹಾಮೋಸದ ಬಗ್ಗೆ ಈ ಹಿಂದೆ ಬರೆದಿದ್ದೆ.[ನೋಡಿ] ಮಾನವ ಇನ್ಸುಲಿನ್ ನ ಅರ್ಧ ಕ್ರಯಕ್ಕೆ ಲಭ್ಯವಿದ್ದ (ಕ್ರಮವಾಗಿ ರೂ. 150 ಹಾಗೂ ರೂ. 75) ಪ್ರಾಣಿಜನ್ಯ್ ಇನ್ಸುಲಿನ್ ಇದೀಗ ಮಾರುಕಟ್ಟೆಯಿಂದ ಮಾಯವಾಗಿದೆ. ಮಾನವ ಇನ್ಸುಲಿನಿಗೆ ನೀಡಲಾಗುತ್ತಿರುವ ಅಬ್ಬರದ ಪ್ರಚಾರದ ನಡುವೆ ಪ್ರಾಣಿಜನ್ಯ ಇನ್ಸುಲಿನಿಗೆ ಕುಂದಿದ ಬೇಡಿಕೆ, ಸರಿಯಾಗಿ ದೊರೆಯದ ಕಚ್ಛಾ ಪದಾರ್ಥಗಳು, ಕುಗ್ಗಿದ ಲಾಭಾಂಶ ಇತ್ಯಾದಿ ಕಾರಣಗಳಿಂದಾಗಿ ಪ್ರಾಣಿಜನ್ಯ ಇನ್ಸುಲಿನನ್ನು ಹಿಂಪಡೆದಿರುವ ಸಾಧ್ಯತೆಗಳಿವೆ. ಪ್ರಾಣಿಜನ್ಯ ಇನ್ಸುಲಿನ್ ತಯಾರಕರಿಂದ ಈ ಬಗ್ಗೆ ವಿವರಗಳನ್ನು ಪಡೆಯುವ ನಮ್ಮ ಯತ್ನಗಳು ಫಲ ನೀಡಿಲ್ಲ.  read more »

ಡೆಂಗೀ ಜ್ವರ, ಚಿಕುಂಗುನ್ಯಾ, ಮಲೇರಿಯಾ ಬಗ್ಗೆ ಅಲಕ್ಷ್ಯವೇಕೆ?

ವಿದೇಶಗಳಿಂದ ಮರಳುವಾಗ ಇನ್ ಫ್ಲುಯೆಂಜಾ ಎ (H1N1) (ಹಂದಿ ಜ್ವರ) ವನ್ನು ಹೊತ್ತು ತಂದು, ರೋಗ ಲಕ್ಷಣಗಳಿದ್ದರೂ ಅಡಗಿಸಿಟ್ಟು, ಮನೆಮಂದಿಗೆ ಹಾಗೂ ಅಕ್ಕ ಪಕ್ಕದವರಿಗೆಲ್ಲ ಹರಡುವ ಶ್ರೀಮಂತರ 'ಮನವೊಲಿಸಲು' ಆರೋಗ್ಯಾಧಿಕಾರಿಗಳು ಅಂತಹವರ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ಬಗ್ಗೆ ವರದಿಯಾಗಿದೆ. [ನೋಡಿ 1,2]  read more »

ಹತ್ತು ವರ್ಷದ ಬಾಲಕಿಯಲ್ಲಿ ಸ್ತನದ ಕ್ಯಾನ್ಸರ್!

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿರುವ ಹಾನಾ ಪೊವೆಲ್ ಎಂಬ ಹತ್ತು ವರ್ಷದ ಬಾಲಕಿಯಲ್ಲಿ ಸ್ತನದ ಕ್ಯಾನ್ಸರ್ ಕಾಣಿಸಿಕೊಂಡಿದೆಯೆಂಬ ಸುದ್ದಿಯು ದಂಗುಬಡಿಸುವಂತಹದ್ದಾಗಿದೆ.[1-4; ಅವಳ ಹೆತ್ತವರು ರಚಿಸಿದ ಜಾಲ ತಾಣ ಇಲ್ಲಿದೆ] ಫ್ರೌಢಾವಸ್ಥೆಗೆ ಕಾಲಿಡುವಷ್ಟರಲ್ಲಿಯೇ ಪುಟ್ಟ ಹುಡುಗಿಯೊಬ್ಬಳು ಇಂತಹಾ ಭೀಕರವಾದ ಸಮಸ್ಯೆಗೆ ತುತ್ತಾಗುವುದೆಂದರೆ ಎಲ್ಲರಿಗೂ ಚಿಂತೆಯ ವಿಷಯವೇ ಸರಿ.  read more »

ದಾನಶೂರ ಬಿಲ್ ಗೇಟ್ಸನೂ, ನಮ್ಮ ಆರೋಗ್ಯವೂ

ನಮ್ಮ ಕಾಲದ ದಾನಶೂರನೆಂದು ಬಿಂ‍ಬಿಸಲ್ಪಡುತ್ತಿರುವ ಬಿಲ್ ಗೇಟ್ಸ್ ಮಹಾಶಯನ ದಾನಗಳ ಬಗ್ಗೆ ಲ‍ಂಡನ್ ವಿಶ್ವವಿದ್ಯಾಲಯದ ಡೇವಿಡ್ ಮೆಕಾಯ್, ಗಾಯತ್ರಿ ಕೆಂಭಾವಿ, ಜಿನೇಶ್ ಪಟೇಲ್ ಮತ್ತು ಅಕಿಶ್ ಲಿಂಟೆಲ್ ನಡೆಸಿದ ಅಧ್ಯಯನದ ವರದಿಯು ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆಯಾದ ದಿ ಲಾಂಸೆಟ್ ನಲ್ಲಿ ಮೇ 9 ರಂದು ಪ್ರಕಟಗೊಂಡಿದೆ. ಈ ವರದಿಯ ಪ್ರಕಾರ, ಇದುವರೆಗೆ ಬಿಡುಗಡೆ ಮಾಡಿದ 8.95 ಬಿಲಿಯ ಡಾಲರುಗಳಲ್ಲಿ ಶೇ. 65ರಷ್ಟನ್ನು ಅಮೆರಿಕಾದಲ್ಲಿರುವ 20 ಸಂಸ್ಥೆಗಳಿಗೆ (ಅದರಲ್ಲಿ ಹಲವು ಗೇಟ್ಸ್ ನ ನೆಲೆಯಾದ ಸಿಯಟ್ಲ್ ನಲ್ಲೇ ಇರುವಂತವು) ನೀಡಲಾಗಿದೆ. (ಬಲಗೈಯಿಂದ ಕೊಟ್ಟು ಎಡಗೈಯಿಂದ ಪಡೆಯುವ ವ್ಯವಸ್ಥೆಯೇ?) ಇದರಲ್ಲಿ ಶೇ. 42ರಷ್ಟು ಹಣವನ್ನು ಆರೋಗ್ಯ ಸೇವೆಗಳ ದೊರಕುವಿಕೆಯನ್ನು ಹೆಚ್ಚಿಸುವ ಪ್ರಯತ್ನಗಳಿಗೂ, ಶೇ.  read more »

ಹಂದಿ ಜ್ವರವನ್ನು ತರುತ್ತಿರುವ ಹಂದಿ(?)ಗಳ ಬಗ್ಗೆ ಎಚ್ಚರ!!

ಏನಿದು ಹಂದಿ ಜ್ವರ? ಅದು ಭಾರತಕ್ಕೆ ಬರುತ್ತಿದೆಯಾ? ಇದು ಸಾವಿಗೆ ಕಾರಣವಾಗುತ್ತಿದೆಯಾ? ಇದಕ್ಕೆ ಬಡ ಹಂದಿಗಳು ಕಾರಣವೇ? ಹಂದಿ ಮಾಂಸ ತಿನ್ನುವುದರಿಂದ ಬರುತ್ತಾ? ಇದು ಇದ್ದಕ್ಕಿದ್ದ ಹಾಗೆ ಹೇಗೆ ಪ್ರಾರಂಭವಾಯಿತು? ಹೀಗೆ ಹಲವಾರು ಪ್ರಶ್ನೆಗಳು ನಿಮಗೆ ಕಾಡುತ್ತಿರಬಹುದು.

ಇದಕ್ಕೆ ಹಂದಿ ಜ್ವರವೆಂದು ಕರೆಯುವುದನ್ನು ಪ್ರತಿಭಟಿಸಿರುವುದರಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದ್ದು, ಈಗ ಸ್ವೈನ್ ಫ್ಲೂ ಎಂದು ಕರೆಯುತ್ತಿದ್ದರೂ ಅದು ಮಾಮೂಲಿಯಂತೆ ಇನ್ ಫ್ಲುಯನ್ ಝಾ(Influenza) ಫ್ಲೂ ಆಗಿದೆ. ಫ್ಲೂ ಜ್ವರದಲ್ಲೇ ಇದೊಂದು ಮಾದರಿಯಾಗಿದ್ದು, ಹೆಚ್೧ ಎನ್೧ ವೈರಸ್ ನಿಂದ ಹರಡುತ್ತದೆ. ಆದರೆ ಇದಕ್ಕೆ ಇಷ್ಟೊಂದು ವ್ಯವಸ್ಥಿತ ಪ್ರಚಾರ ಯಾಕೆ ಪಡೆಯುತ್ತಿದೆ? ಇದರ ಹಿಂದಿರುವ ಮನುಷ್ಯ-ಹಂದಿಗಳ ಬಗ್ಗೆ ಎಚ್ಚರವಾಗಿರಿ.  read more »

ವೈದ್ಯರನ್ನು ವಂಚಿಸಲು ನಕಲಿ ಪತ್ರಿಕೆಗಳ ಪ್ರಕಟಣೆ

ಹೊಸ ನೋವು ನಿವಾರಕಗಳ ಬಗೆಗಿನ ಅಧ್ಯಯನಗಳಲ್ಲಾದ ಮೋಸಗಳ ಬಗ್ಗೆ  read more »

ಈಗ ಹಂದಿ ಜ್ವರ!

ಈಗ ಎಲ್ಲೆಂದರಲ್ಲಿ ಹಂದಿ ಜ್ವರದ್ದೇ ಹುಯಿಲು. ಎಲ್ಲಾ ದೃಶ್ಯ ಮಾಧ್ಯಮಗಳಲ್ಲೂ, ವಾರ್ತಾ ಪತ್ರಿಕೆಗಳ ಮುಖಪುಟಗಳಲ್ಲೂ ಅದರದ್ದೇ ಸುದ್ದಿ. ಎಲ್ಲೆಂದರಲ್ಲಿ ಮುಖ ಮುಚ್ಚಿಕೊಂಡು ಓಡಾಡುವವರ ಚಿತ್ರಗಳು. ಜಗತ್ತಿನಾದ್ಯಂತ ಕೋಟಿಗಟ್ಟಲೆ ಜನ ಸತ್ತು ಉರುಳಲು ಕ್ಷಣಗಣನೆ ಶುರುವಾಗಿದೆಯೇನೋ ಎಂಬಂತೆ ಹೆದರಿಕೆ ಹುಟ್ಟಿಸುವ ಪ್ರಚಾರ. ಆರು ವರ್ಷಗಳ ಹಿಂದೆ ಸಾರ್ಸ್, ಮೂರು ವರ್ಷಗಳ ಹಿಂದೆ ಹಕ್ಕಿ ಜ್ವರ, ಈಗ 'ಹಂದಿ ಜ್ವರ'. ಮೂರು ವರ್ಷಗಳಿಗೊಂದು 'ಹೊಸ' ಸೋಂಕು ರೋಗವೇ? ಹಕ್ಕಿ ಜ್ವರದ ಚಿಕಿತ್ಸೆಗೆಂದು ನಮ್ಮ ಸರಕಾರ ದಾಸ್ತಾನು ಮಾಡಿದ್ದ ಟಾಮಿಫ್ಲು ಇತ್ಯಾದಿ ಔಷಧಗಳು ಬಳಕೆಗೆ ಬಾರದೆ, ಅವಧಿ ಮೀರಿ ತಿಪ್ಪೆ ಸೇರಲು ತಯಾರಾಗುತ್ತಿದ್ದಂತೆ, ಮತ್ತೊಂದು ಸಲ ಅದೇ ಔಷಧಗಳನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿರುವಂತೆ ಕಾಣಿಸುತ್ತಿದೆ. ಹೀಗಾಗಿ, ಈಗ ಅನಾವರಣಗೊಳ್ಳುತ್ತಿರುವ 'ಹಂದಿ ಜ್ವರ'ದ ವರದಿಗಳನ್ನು ಯಥಾವತ್ತಾಗಿ ನಂಬುವಂತೆಯೂ ಇಲ್ಲ, ಸಾರಾಸಗಟಾಗಿ ಸುಳ್ಳೆಂದು ತಳ್ಳಿ ಹಾಕುವಂತೆಯೂ ಇಲ್ಲ.  read more »

ನೋವು ನಿವಾರಕಗಳ ನೋವಿನ ಕಥೆ

27Mar2009

ಅಮೆರಿಕಾದ ಮಸಚುಸೆಟ್ಸ್ ನ ಬೇಸ್ಟೇಟ್ ಮೆಡಿಕಲ್ ಸೆಂಟರಿನಲ್ಲಿ ಅರಿವಳಿಕೆ ಹಾಗೂ ನೋವು ನಿವಾರಣಾ ತಜ್ಞನಾಗಿರುವ ಸ್ಕಾಟ್ ರೂಬೆನ್ ಕಳೆದ ಹನ್ನೆರಡು ವರ್ಷಗಳಲ್ಲಿ ನೋವು ನಿವಾರಣೆಯ ವಿಧಾನಗಳ ಬಗ್ಗೆ 72 ಸಂಶೋಧನಾ ಲೇಖನಗಳನ್ನು ಬರೆದ; ಪ್ರತಿಷ್ಠಿತವೆನಿಸಿಕೊಂಡ ವೈದ್ಯಕೀಯ ಪತ್ರಿಕೆಗಳಲ್ಲಿ ಅವು ಪ್ರಕಟಗೊಂಡವು. ಇವುಗಳಲ್ಲಿ ಹಲವು ಲೇಖನಗಳು ಬಹುರಾಷ್ಟ್ರೀಯ ದೈತ್ಯ ಔಷಧ ತಯಾರಕ ಕಂಪೆನಿಯಾದ ಫೈಸರ್ ನ ಉತ್ಪನ್ನಗಳಾದ ಸೆಲೆಕಾಕ್ಸಿಬ್ ಎಂಬ ಹೊಸ ನೋವು ನಿವಾರಕ ಔಷಧ ಹಾಗೂ ಪ್ರೆಗಾಬಾಲಿನ್ ಎಂಬ ನರಶೂಲೆ ನಿವಾರಕ ಔಷಧಗಳ ಬಗೆಗಾಗಿದ್ದವು.  read more »

ಮೊದಾಸಾದಲ್ಲಿ ಹೆಪಟೈಟಿಸ್ ಬಿ/ಡಿ: ರಕ್ಷಣೆ ಹೇಗೆ?

ಕಳೆದ ಕೆಲ ದಿನಗಳಿಂದ ಗುಜರಾತಿನ ಸಬರಕಾಂತಾ ಜಿಲ್ಲೆಯ ಮೊದಾಸದಲ್ಲಿ ನೂರೈವತ್ತಕ್ಕೂ ಹೆಚ್ಚು ಜನರು ಹೆಪಟೈಟಿಸ್ ಬಿ/ಡಿ ಸೋಂಕಿಗೆ ತುತ್ತಾಗಿರುವ ಬಗ್ಗೆ ಹಾಗೂ ಸುಮಾರು ೩೫ರಷ್ಟು ರೋಗಿಗಳು ಅದರಿಂದಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಸೋಕು ತಗಲಿಸಿಕೊಂಡವರೆಲ್ಲ ಡಾ|ಗೋವಿಂದ ಪಟೇಲ್ (ಎಂ.ಬಿ.ಬಿ.ಎಸ್) ಎಂಬ ವೈದ್ಯನಿಂದ ಕಳೆದ ಆರು ತಿಂಗಳೊಳಗೆ ಚಿಕಿತ್ಸೆಯನ್ನು ಪಡೆದಿದ್ದರೆನ್ನುವುದು ಹಾಗೂ ಯಾವುದೇ ತರಬೇತಿಯಿಲ್ಲದ ಆತನ ಮಗ ಚಿಂತನ್ ಪಟೇಲ್ ಈ ರೋಗಿಗಳಿಗೆ ಚುಚ್ಚುಮದ್ದನ್ನು ನೀಡುತ್ತಿದ್ದನೆನ್ನುವುದು ತನಿಖೆಗಳಲ್ಲಿ ವ್ಯಕ್ತವಾಗಿದ್ದು, ಅವರಿಬ್ಬರನ್ನೂ ಈಗ ಬಂಧಿಸಲಾಗಿದೆ.  read more »

Syndicate content